ಹಿಂದೆ ಜನ 'ಮಳೆಯಪ್ಪ ಮಳೆರಾಯ ಕರೆಯುತ್ತಾರೆ ನಿನ್ನ ' - ಎಂದು ಹಾಡುತ್ತಿದ್ದನ್ನ ಬಹಳಷ್ಟು ಕೇಳಿದ್ವಿ. ಆದರೆ ಎಲ್ಲೋ ಮಳೆಯಾಗಿದೆ ಇಂದು ಅಂತ ಕೇಳಿ ಬಾ ಮಳೆಯೇ ಬಾ ಅಂತ ಜನರು ಕೂಗಿ ಕರೆದಿದಕ್ಕೆ ಮುಂಗಾರು ಮಳೆಯಿಂದ ಶುರು ಆಯಿತು ನೋಡಿ. ಎಲ್ಲಿ ನೋಡಿದರು ಅಲೆ ಅಲೆ, ಮಳೆ ಮಳೆ. ಮಳೆಯೂ ಬರಬೇಕಂತೆ, ಮಂಜೂ ಇರಬೇಕಂತೆ, ಎಷ್ಟು ದುರಾಸೆ ನೋಡಿ ಜನಕ್ಕೆ. ಮಳೆ ಬಂದ ನಂತರ - ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿತ್ತು ಅಂತ ಎಲ್ಲಾ ಕಡೆ ಮಳೆ ಆದಮೇಲೆ ಕನಸು ಕಾಣುತ್ತಿರಬೇಡಿ!!
ಈ ಮಳೆ ಪ್ರಕರಣ ಮುಗಿದು ಯವಾಗ ನಮ್ಮ ಕನ್ನಡ ಚಿತ್ರ-ರಂಗಕ್ಕೆ ಬಿಸಿಲು ಬೀಳುತ್ತೋ, ಕಾತುರದಿಂದ ಕಾದು ನೋಡಬೇಕು. ನಿರ್ಮಾಪಕರೇ - ಕೇಳಿಸಿಕೊಳ್ಳುತ್ತಿದ್ದೀರಾ?